Gajamukhane ganapathiye lyrics in kannada | Lyrics Session

 

Gajamukhane ganapathiye lyrics in kannada

ಶುಕ್ಲಂ ಭರದರಂ ವಿಷ್ಣುಂ
ಶಶಿ ವರನಂ ಚತುರ್ ಭುಜಂ
ಪ್ರಸನ್ನ ವದನಂ ಧ್ಯಾಯೆತ್
ಸರ್ವ ವಿಘ್ನೋಪಶಾಂತಯೇ..

ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ
ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗೂ ದಯಮಾಡಿ ಹರಸು ಎಂದು
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆ ಮನೆಗೂ ದಯಮಾಡಿ ಹರಸು ಎಂದು
ನಿನ್ನ ಸನ್ನಿಧಾನಕ್ಕೆ ತಲೆ ಬಾಗಿ ಕೈಯ ಮುಗಿದು
ಬೇಡುವ ಭಕ್ತರಿಗೆ ನೀ ದಯಾ ಸಿಂಧು

ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

ಏರೇಳು ಲೋಕದ ಅಣು ಅಣುವಿನ
ಇಹ ಪರದ ಸಾಧನಕೆ ನೀನೆ ಕಾರಣ
ಏರೇಳು ಲೋಕದ ಅಣು ಅಣುವಿನ
ಇಹ ಪರದ ಸಾಧನಕೆ ನೀನೆ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ

ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ

ಪಾರ್ವತಿ ಪರಶಿವನ ಪ್ರೇಮ ಪುತ್ರನೆ
ಪಾಲಿಸುವ ಪರದೈವ ಬೇರೆ ಕಾಣೆ
ಪಾರ್ವತಿ ಪರಶಿವನ ಪ್ರೇಮ ಪುತ್ರನೆ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದ ಸೇವೆ ಒಂದೇ ಧರ್ಮ ಸಾಧನ

ಗಜಮುಖನೆ ಗಣಪತಿಯೆ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ


Comments