ನೀಡು ಶಿವ ನೀಡದಿರು ಶಿವ (NEEDU SHIVA NEEDADIRU SHIVA) KANNADA SONG LYRICS

 Needu Shiva Lyrics

ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ ನೀ ನನ್ನ ಅಂಬಲಿ
ನೀಡು ಶಿವ ನೀಡದಿರು... ಶಿವ
ಬಾಗುವುದು ನನ್ನ ಕಾಯ

ಶೃಂಗಾರ ಕೃತಕ ಬಂಗಾರ ಕ್ಷಣಿಕ
ಬಾಳಲ್ಲಿ ಬಡಿವಾರವೇಕೆ ||2||

ನೀನಿತ್ತ ಕಾಯ...
ನೀನಿತ್ತ ಕಾಯ ನಿನ್ನ ಕೈಲೇ ಮಾಯ
ಆಗೋದು ಹೋಗೋದು ನಾ ಕಾಣೆನೆ

ಮಾಳಿಗೆ ಕೊಟ್ಟರು ಮರದಡಿಯೆ ಇಟ್ಟರು
ನಾನಂತು ನಿನ್ನನ್ನಲಾರೆ||2||
ಸಾರಂಗ ಮನಕೆ…. .
ಸಾರಂಗ ಮನಕೆ ನೂರಾರು ಬಯಕೆ
ಮುಂದಿಟ್ಟು ರಮಿಸೋದು ನಾ ಕಾಣೆನೆ

ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ
ನಾನೇಕೆ ಅಂಜಲಿ
ನೀ ನನ್ನ ಅಂಬಲಿ
ನೀಡು ಶಿವ ನೀಡದಿರು ಶಿವ
ಬಾಗುವುದು ನನ್ನ ಕಾಯ..........


Comments