ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ
ಅಂಬಿಗಾ ಜಗದಂಬಿಗಾ
ಅಂಬಿಗಾ ನಿನ್ನ ನಂಬಿದೆ
ತುಂಬಿದ ಹರಿಗೋಲಂಬಿಗಾ
ಅದಕೊಂಭತ್ತು ಛಿದ್ರನೋಡಂಬಿಗಾ
ಸಂಭ್ರಮದಿಂ ನೋಡಂಬಿಗಾ
ಅದರಿಂಬು ನೋಡಿ ನಡೆಸಂಬಿಗಾ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ
ಅಂಬಿಗಾ ಜಗದಂಬಿಗಾ
ಅಂಬಿಗಾ ನಿನ್ನ ನಂಬಿದೆ
ಹೊಳೆಯ ಭರವ ನೋಡಂಬಿಗಾ
ಅದಕ್ಕೆ ಸೆಳವು ಘನವಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗಾ
ಎನ್ನ ಸೆಳೆದುಕೊಳ್ಳಯ್ಯಾ ನೀನಂಬಿಗಾ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ
ಅಂಬಿಗಾ ಜಗದಂಬಿಗಾ
ಅಂಬಿಗಾ ನಿನ್ನ ನಂಬಿದೆ
ಆರು ತೆರೆಯ ನೋಡಂಬಿಗಾ
ಅದು ಮೀರಿ ಬರುತಲಿದೆ ಅಂಬಿಗಾ
ಯಾರಿಂದಲಾಗದು ಅಂಬಿಗಾ
ಅದ ನಿವಾರಿಸಿ ದಾಟಿಸೊ ಅಂಬಿಗಾ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ
ಅಂಬಿಗಾ ಜಗದಂಬಿಗಾ
ಅಂಬಿಗಾ ನಿನ್ನ ನಂಬಿದೆ
ಹೊತ್ತು ಹೋಯಿತು ನೋಡಂಬಿಗಾ
ಅಲ್ಲಿ ಮತ್ತೈವರೀರ್ವರು ಅಂಬಿಗಾ
ಒತ್ತಿ ನಡೆಸಿ ನೋಡಂಬಿಗಾ
ಎನ್ನ ಸತ್ಯ ಲೋಕಕೆ ಒಯ್ಯೊ ಅಂಬಿಗಾ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ
ಅಂಬಿಗಾ ಜಗದಂಬಿಗಾ
ಅಂಬಿಗಾ ನಿನ್ನ ನಂಬಿದೆ
ಸತ್ಯವೆಂಬುದೆ ಹುಟ್ಟಂಬಿಗಾ
ಸದಾ ಭಕ್ತಿಎಂಬುದೆ ಪಥವಂಬಿಗಾ
ಮುಕ್ತಿದಾಯಕ ನಮ್ಮ ಪುರಂದರ ವಿಠ್ಠಲನ ಮುಕ್ತಿಮಂಟಪಕೊಯ್ಯೊ ಅಂಬಿಗಾ
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬಾರಮಣ ನಿನ್ನ ನಂಬಿದೆ
ಅಂಬಿಗಾ ಜಗದಂಬಿಗಾ
ಅಂಬಿಗಾ ನಿನ್ನ ನಂಬಿದೆ

Comments
Post a Comment