ವರವ ಕೊಡೆ ಚಾಮುಂಡಿ ವರವ ಕೊಡೆ / Varava Kode Chamundi Varava Kode

 

ವರವ ಕೊಡೆ ಚಾಮುಂಡಿ ವರವ ಕೊಡೆ / Varava Kode Chamundi Varava Kode


ವರವ ಕೊಡೆ ಚಾಮುಂಡಿ ವರವ ಕೊಡೆ||2||

ಸೆರಗೊಡ್ಡಿ ಬೇಡುವೆನೂ ವರವ ಕೊಡೆ

ವರವ ಕೊಡೆ

ಒಲವಿಂದ ನೀನೆನಗೆ ,ವರ ನೀಡಿ ಸಲಹದಿರೆ||2||

ನಿನ್ನಾಣೆ ನಾ ನಿನ್ನ‌ ಪಾದ ಬಿಡೆ

ನಿನ್ನ ಪಾದ ಬಿಡೆ ||ವರವ||


ಕುಂಕುಮವು ಅರಸಿನವು

ಹೊಳೆವಂತ ಕರಿಮಣಿಯು||ಕುಂಕುಮ||

ಸ್ಥಿರವಾಗಿ ಇರುವಂತೆ ವರವ ತೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ

ವರವ ಕೊಡೆ ||ವರವ||


ಬಾಗಿಲಲಿ ತೋರಣ

ಮದುವೆ ಮುಂಜಿ ನಾಮಕರಣ||ಬಾಗಿಲಲಿ||

ಯಾವಾಗಲು ಆಗುವಂತೆ ವರವ ಕೊಡೆ

ನಿನ್ನಾಣೆ ನಾ ನಿನ್ನ ಪಾದ ಬಿಡೆ

ನಿನ್ನ ಪಾದ ಬಿಡೆ ||ವರವ||


ಹೆಸರುಳ್ಳ ಮನೆ ಕಟ್ಟಿ

ಹಸು ಕರುಗಳ ಸಾಲು ಕಟ್ಟಿ||ಹೆಸರು||

ವಂಶವ್ರಧ್ಧಿ ಆಗುವಂತೆ ವರವ ಕೊಡೆ

ಸೆರಗೊಡ್ಡಿ ಬೇಡುವೆನು ವರವ ಕೊಡೆ

ವರವ ಕೊಡೆ ||ವರವ||


ಮನೆಯಲ್ಲಿ ಹರುಷ ಕೊಟ್ಟು

ಮನದಲ್ಲಿ ಶಾಂತಿ ಕೊಟ್ಟು||ಮನೆಯ||

ಭಕ್ತಿ ಹ್ರದಯ ತುಂಬುವಂತೆ ವರವ ಕೊಡೆ

ನಿನ್ನಾಣೆ ನಾ ನಿನ್ನ ಪಾದ ಬಿಡೆ

ನಿನ್ನ ಪಾದ ಬಿಡೆ ||ವರವ|| 





Comments